Vision & Mission

1. ಗದಗ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿನ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತರಬೇತಿ ನೀಡುವುದರ ಮೂಲಕ ನೌಕರರ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರುವುದು.

2. ಸರಕಾರಿ ಕಚೇರಿಗಳ ಆಡಳಿತವನ್ನು ಚುರುಕುಗೊಳಿಸುವುದು.

3. ನೌಕರರುಗಳಿಗೆ ಸರಕಾರಿ ನಿಯಮಗಳ ತಿಳುವಳಿಕೆ, ಆಚರಣೆಯ ಬಗೆಗೆ ತರಬೇತುಗೊಳಿಸುವುದು.

4. ಸರಕಾರವು ಹೊಸದಾಗಿ ರಚಿಸಿದ ನಿಯಮ/ಸುತ್ತೋಲೆಗಳ ಬಗ್ಗೆ ತಿಳುವಳಿಕೆ ನೀಡುವುದು.

5. ಸರಕಾರಿ ಕಾರ್ಯನಿರ್ವಹಣೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಗುರುತಿಸಿ ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದು.

6. ಗಣಕಯಂತ್ರ ತರಬೇತಿ ನೀಡುವುದರ ಮೂಲಕ ಮುಂಬರುವ ದಿನಗಳಲ್ಲಿ ಅಳವಡಿಸಲಾಗುವ ಇ-ಆಡಳಿತಕ್ಕೆ ಸಹಕಾರಿಯಾಗುವಂತೆ ತರಬೇತುಗೊಳಿಸುವುದು.

7. ಹೊಸದಾಗಿ ಸರಕಾರವು ಆರಂಭಿಸುವ ಯೋಜನೆಗಳು, ಕಾರ್ಯಕ್ರಮದ ಅನುಷ್ಠಾನಕ್ಕೆ ಸರಕಾರಿ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಿ ಅಣಿಗೊಳಿಸುವುದು.

8. ತರಬೇತಿ ಕಾರ್ಯಕ್ರಮಗಳನ್ನು ನೀಡಲು ನಿಪುಣ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವುದು.

9. ಸರಕಾರಿ ಕಚೇರಿಯಲ್ಲಿನ ಸೌಕರ್ಯಗಳಾದ ವಾಹನ, ದೂರವಾಣಿ ಮುಂತಾದುವುಗಳ ಸೂಕ್ತ ನಿರ್ವಹಣೆ ಬಗ್ಗೆ ಪ್ರಶಿಕ್ಷಣಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು.

10. ಸರಕಾರಿ ಲೆಕ್ಕ ಪತ್ರ / ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ, ಸೂಕ್ತ ರೀತಿಯಲ್ಲಿ ನಿಯಮಾನುಸಾರ ನಿರ್ವಹಣೆ ಮಾಡಲು ತರಬೇತುಗೊಳಿಸುವುದು.

11. ಈ ಮೇಲಿನ ಎಲ್ಲಾ ಕಾರ್ಯಗಳ ಅನುಷ್ಟಾನದಿಂದ ಗದಗ ಜಿಲ್ಲೆಯನ್ನು ಆಡಳಿತ ನಿರ್ವಹಣೆಯಲ್ಲಿ ನಂ. 1 ಸ್ಥಾನಕ್ಕೇರಿಸುವುದು.