ABOUT US

ಗದಗ ಜಿಲ್ಲೆ ಬೆಳೆದು ಬಂದ ಬಗೆ :

'ಮುದ್ರಣ ಕಾಶಿ' ಎಂದೇ ಗುರುತಿಸಲ್ಪಟ್ಟ ಗದಗದ ಜಿಲ್ಲೆಯು ಧಾರ್ಮಿಕ, ಕೈಗಾರಿಕಾ, ಪ್ರವಾಸೀ, ಸಂಗೀತ, ನಾಟಕರಂಗ ಮುಂತಾದ ವಿಷಯಗಳಲ್ಲಿ ಅತ್ಯಂತ ಹೆಸರುವಾಸಿಯಾಗಿದೆ. ಈ ಹಿಂದೆ ಗದಗದ ಜಿಲ್ಲೆಯ ಅವಿಭಾಜಿತ ಧಾರವಾಡ ಜಿಲ್ಲೆಯಲ್ಲಿ ಒಂದು ತಾಲ್ಲೂಕು ಹಾಗೂ ಕಂದಾಯ ಉಪವಿಭಾಗವಾಗಿ ಗುರುತಿಸಲ್ಪಟ್ಟಿತ್ತು. ನಂತರ, ಅಗಸ್ಟ್ 7 1997 ರಂದು ಸ್ವತಂತ್ರವಾಗಿ ಹೊಸ ಜಿಲ್ಲೆಯಾಗಿ ರೂಪುಗೊಂಡಿತು. ಗದಗದ ಜಿಲ್ಲೆಯ ಅತೀ ಪ್ರಸಿದ್ಧ ವ್ಯಕ್ತಿಗಳೆಂದರೆ, ಗದುಗಿನ ನಾರಾಣಪ್ಪನೆಂದೇ ಗುರುತಿಸಲ್ಪಟ್ಟ ಕುಮಾರವ್ಯಾಸ. ಈತನು ಬರೆದ 'ಕರ್ನಾಟಕ ಭಾರತ ಕಥಾಮಂಜರಿಯು ಗದುಗಿನ ಭಾರತ' ಎಂದು ಪ್ರಖ್ಯಾತವಾಗಿದೆ. ಪಂಡಿತ್ ಭೀಮಸೇನ್ ಜೋಶಿ, ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳವರು, ತೋಂಟದಾರ್ಯ ಸಿದ್ಧಲಿಂಗ ಶ್ರೀಗಳವರು, ಹುಯಿಲಗೋಳ ನಾರಾಯಣರಾಯರು, ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು ಹಾಗೂ ಅತ್ಯಂತ ಪ್ರಸಿದ್ಧ ವ್ಯಕ್ತಿಗಳನ್ನು ಈ ಮಣ್ಣು ಕೊಡುಗೆ ನೀಡಿದೆ.

ಗದಗ ಜಿಲ್ಲಾ ತರಬೇತಿ ಸಂಸ್ಥೆಯು ನಡೆದು ಬಂದ ಬಗೆ :

'ಅವಿಭಜಿತ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು 1997 ರಲ್ಲಿ ಗದಗ ಜಿಲ್ಲೆಯು ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ ಧಾರವಾಡ, ಗದಗ, ಹಾವೇರಿ ಈ ಮೂರು ಜಿಲ್ಲೆಯಲ್ಲಿನ ಸರಕಾರಿ ಸಿಬ್ಬಂದಿಗಳು ಧಾರವಾಡದಲ್ಲಿನ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದುಕೊಳ್ಳಬೇಕಿತ್ತು. ಇದನ್ನು ಗಮನಿಸಿದ ಸರಕಾರವು ಪ್ರತಿಯೊಂದು ಜಿಲ್ಲೆಯೂ ಜಿಲ್ಲಾ ತರಬೇತಿ ಸಂಸ್ಥೆಯನ್ನು ಹೊಂದಿರಬೇಕೆಂಬ ನಿಟ್ಟಿನಲ್ಲಿ ಗದಗ, ಹಾವೇರಿ ಜಿಲ್ಲೆಗೆ ಸರಕಾರಿ ಆದೇಶ ಸಂಖ್ಯೆ : ಸಿಆಸುಇ190 ಇಅತ 2007 ದಿನಾಂಕ:14-06-2010 ರನ್ವಯ 2011-12 ನೇ ಸಾಲಿನಲ್ಲಿ ಹೊಸದಾಗಿ ಜಿಲ್ಲಾ ತರಬೇತಿ ಸಂಸ್ಥೆಯನ್ನು ಮಂಜೂರು ಮಾಡಿದೆ.