Frequently Asked Questions

ಸಾಮಾನ್ಯ ಪ್ರಶ್ನೆಗಳು

1. ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಯಾರಿಗೆ ತರಬೇತಿಗಳನ್ನು ಏರ್ಪಡಿಸಲಾಗುತ್ತದೆ?
ಉತ್ತರ:- ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಗದಗ ಜಿಲ್ಲೆಯ ಸರಕಾರಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು

2. ಸರಕಾರಿ ನೌಕರರುಗಳಿಗೆ ಅಲ್ಲದೇ ಬೇರೆಯವರಿಗೆ ತರಬೇತಿಗಳನ್ನು ಆಯೋಜಿಸಲಾಗುತ್ತದೆಯೇ?
ಉತ್ತರ:- ಸರಕಾರಿ ನೌಕರರುಗಳಿಗೆ ಅಷ್ಟೇ ಅಲ್ಲದೇ, ನಗರಸಭೆ/ಪುರಸಭೆ/ಪಟ್ಟಣ ಪಂಚಾಯತ್/ಗ್ರಾಮ ಪಂಚಾಯತ್ ಗಳಲ್ಲಿನ ಅಧ್ಯಕ್ಷ/ಉಪಾಧ್ಯಕ್ಷರುಗಳಿಗೆ/ಸದಸ್ಯರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.

3. ತರಬೇತಿ ಕಾರ್ಯಕ್ರಮಗಳ ಉದ್ದೇಶಗಳೇನು ಮತ್ತು ಇದರಿಂದ ಆಗುವ ಪ್ರಯೋಜನಗಳೇನು?
ಉತ್ತರ:-
ಅ) ಗದಗ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿನ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತರಬೇತಿ ನೀಡುವುದರ ಮೂಲಕ ನೌಕರರ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರುವುದು.
ಆ) ಸರಕಾರಿ ಕಚೇರಿಗಳ ಆಡಳಿತವನ್ನು ಚುರುಕುಗೊಳಿಸುವುದು.
ಇ) ನೌಕರರುಗಳಿಗೆ ಸರಕಾರಿ ನಿಯಮಗಳ ತಿಳುವಳಿಕೆ, ಆಚರಣೆಯ ಬಗೆಗೆ ತರಬೇತುಗೊಳಿಸುವುದು.
ಈ) ಸರಕಾರವು ಹೊಸದಾಗಿ ರಚಿಸಿದ ನಿಯಮ/ಸುತ್ತೋಲೆಗಳ ಬಗ್ಗೆ ತಿಳುವಳಿಕೆ ನೀಡುವುದು.
ಉ) ಸರಕಾರಿ ಕಾರ್ಯನಿರ್ವಹಣೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಗುರುತಿಸಿ ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದು.
ಊ) ಗಣಕಯಂತ್ರ ತರಬೇತಿ ನೀಡುವುದರ ಮೂಲಕ ಮುಂಬರುವ ದಿನಗಳಲ್ಲಿ ಅಳವಡಿಸಲಾಗುವ ಇ-ಆಡಳಿತಕ್ಕೆ ಸಹಕಾರಿಯಾಗುವಂತೆ ತರಬೇತುಗೊಳಿಸುವುದು.
ಋ) ಹೊಸದಾಗಿ ಸರಕಾರವು ಆರಂಭಿಸುವ ಯೋಜನೆಗಳು, ಕಾರ್ಯಕ್ರಮದ ಅನುಷ್ಠಾನಕ್ಕೆ ಸರಕಾರಿ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಿ ಅಣಿಗೊಳಿಸುವುದು.
ಎ) ತರಬೇತಿ ಕಾರ್ಯಕ್ರಮಗಳನ್ನು ನೀಡಲು ನಿಪುಣ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವುದು.
ಏ) ಸರಕಾರಿ ಕಚೇರಿಯಲ್ಲಿನ ಸೌಕರ್ಯಗಳಾದ ವಾಹನ, ದೂರವಾಣಿ ಮುಂತಾದುವುಗಳ ಸೂಕ್ತ ನಿರ್ವಹಣೆ ಬಗ್ಗೆ ಪ್ರಶಿಕ್ಷಣಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು.
ಐ) ಸರಕಾರಿ ಲೆಕ್ಕ ಪತ್ರ / ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ, ಸೂಕ್ತ ರೀತಿಯಲ್ಲಿ ನಿಯಮಾನುಸಾರ ನಿರ್ವಹಣೆ ಮಾಡಲು ತರಬೇತುಗೊಳಿಸುವುದು.

4. ತರಬೇತಿಗಳಿಂದ ಕಚೇರಿ ಕಾರ್ಯನಿರ್ವಹಣೆಗೆ ಹೇಗೆ ಸಹಕಾರಿಯಾಗಬಲ್ಲುದು?
ಉತ್ತರ:- ಸಾಕಷ್ಟು ಸರಕಾರಿ ಕಚೇರಿಗಳಲ್ಲಿ ಸೂಕ್ತ ನಿಯಮಗಳ ಹಾಗೂ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಅರಿವಿಲ್ಲದೇ, ಹಲವಾರು ಬಾರಿ ಕಚೇರಿ ಕೆಲಸಗಳು ನಿಧಾನಗತಿಯಲ್ಲಿ ಸಾಗುವುದರ ಮುಖ್ಯ ಕಾರಣವಾಗಿದೆ. ಸರಕಾರಿ ನೌಕರರುಗಳಿಗೆ ಕಾರ್ಯನಿರ್ವಹಣೆ ಬಗ್ಗೆ ಹಾಗೂ ಸರಕಾರಿ ನಿಯಮಗಳ ಬಗ್ಗೆ ತರಬೇತಿ ಮೂಲಕ ಸೂಕ್ತ ಮಾಹಿತಿ ನೀಡಿದಲ್ಲಿ ಸರಕಾರಿ ಕೆಲಸ ಕಾರ್ಯಗಳು ನಿಗದಿಪಡಿಸಿದ ಸಮಯದಲ್ಲಿ ಸುಗಮವಾಗಿ ಸಾಗುವುದು. ಅಲ್ಲದೇ, ಕಡತಗಳ/ದಾಖಲೆಗಳ ಸಂರಕ್ಷಣೆ ಕುರಿತು ಸಮರ್ಪಕ ನಿರ್ವಹಣೆ ಮಾಡಲು ಜಾಗೃತಿ ಉಂಟಾಗುವುದು.

5. ತರಬೇತಿ ಕಾರ್ಯಕ್ರಮಗಳನ್ನು ಹೇಗೆ ತಯಾರಿಸಲಾಗುವುದು?
ಉತ್ತರ:- ಪ್ರತಿ ಆರ್ಥಿಕ ವರ್ಷದಲ್ಲಿ ಈ ತರಬೇತಿ ಸಂಸ್ಥೆಯ ಮಾನ್ಯ ಜಿಲ್ಲಾಧಿಕಾರಿಗಳು, ಗದಗ ರವರ ಅಧ್ಯಕ್ಷತೆಯಲ್ಲಿನ ವ್ಯವಸ್ಥಾಪಕ ಸಮಿತಿಯಲ್ಲಿ ಗದಗ ಜಿಲ್ಲೆಯ ಸರಕಾರಿ ಸಿಬ್ಬಂದಿಗಳಿಗೆ ಅವಶ್ಯಕವಾದ ತರಬೇತಿಗಳನ್ನು ಗುರುತಿಸಿ ಅದರ ಅವಶ್ಯಕತೆಯನ್ನು ಮನಗಂಡು ವಾರ್ಷಿಕ ಕಾರ್ಯಕ್ರಮ ಪಟ್ಟಿಯನ್ನು ತಯಾರಿಸಲಾಗುವುದು. ಈ ಪಟ್ಟಿಯನ್ನು ಈ ಸಂಸ್ಥೆಯ ಮಹಾನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರು ಅಂತಿಮವಾಗಿ ಅನುಮೋದನೆ ನೀಡುವರು.

ಗದಗ ಜಿಲ್ಲೆಗೆ ಸಂಬಂಧಿಸಿದಂತೆ, ಎಲ್ಲಾ ಸರಕಾರಿ ಕಚೇರಿಗಳ ಮುಖ್ಯಸ್ಥರುಗಳಿಗೆ ಪತ್ರ ಬರೆದಿದ್ದು, ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅವಶ್ಯವಿರುವ ತರಬೇತಿಗಳ ವಿವರಗಳನ್ನು ಒದಗಿಸಲು ಕೋರಲಾಗಿದೆ. ಈ ರೀತಿಯಾಗಿ ಅವಶ್ಯಕತೆಯನ್ನು ಮನಗಂಡು ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಅಷ್ಟೇ ಅಲ್ಲದೇ, ಈ ಸಂಸ್ಥೆಯ ಕೇಂದ್ರ ಕಚೇರಿಯಾದ ಆಡಳಿತ ತರಬೇತಿ ಸಂಸ್ಥೆಯಿಂದ ಹಾಗೂ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ರಾಜ್ಯ ನಗರಾಭಿವೃದ್ಧಿ ಸಂಸ್ಥೆ,ಮೈಸೂರುವತಿಯಿಂದಹಮ್ಮಿಕೊಳ್ಳಲಾಗುವಪ್ರಾಯೋಜಿತತರಬೇತಿಕಾರ್ಯಕ್ರಮಗಳನ್ನುಏರ್ಪಡಿಸಲಾಗುವುದು

6. ಪ್ರಶಿಕ್ಷಣಾರ್ಥಿಗಳಿಗೆ ಯಾರಿಂದ ತರಬೇತಿ ನೀಡಲಾಗುವುದು?
ಉತ್ತರ:- ಪ್ರಶಿಕ್ಷಣಾರ್ಥಿಗಳಿಗೆ ಆಯಾ ತರಬೇತಿಗೆ ಅನುಗುಣವಾಗಿ ನಿಪುಣ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು

7. ತರಬೇತಿಗೆ ಹಾಜರಾಗುವ ಪ್ರಶಿಕ್ಷಣಾರ್ಥಿಗಳಿಗೆ ಒದಗಿಸುವ ವಸತಿ ಸೌಲಭ್ಯ ಮತ್ತು ಇತರೆ ಸೌಲಭ್ಯಗಳಾವುವು?
ಉತ್ತರ:- ಗದಗ ಜಿಲ್ಲಾ ತರಬೇತಿ ಸಂಸ್ಥೆಯು ಹೊಸದಾಗಿ ಪ್ರಾರಂಭವಾದ ಸಂಸ್ಥೆಯಾಗಿದ್ದು, ಸಧ್ಯ ಭಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಗೆ ತರಬೇತಿಗಳಿಗೆ ಆಗಮಿಸುವ ಪ್ರಶಿಕ್ಷಣಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿಲ್ಲ. ಕಾರಣ, ಪ್ರಶಿಕ್ಷಣಾರ್ಥಿಗಳು ಪ್ರಯಾಣ ಭತ್ಯೆ ಮತ್ತು ದಿನಭತ್ಯೆಗಳನ್ನು ಸಂಬಂಧಿಸಿದ ಮಾತೃ ಕಚೇರಿಯಿಂದ ಪಡೆಯಲು ಅರ್ಹರಾಗಿರುತ್ತಾರೆ.

ತರಬೇತಿಗೆ ಹಾಜರಾಗುವ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಗೆ ಅನುಗುಣವಾಗಿ ಸೂಕ್ತ ನಿಯಮಗಳ ಪ್ರತಿ, ಕೈಪಿಡಿ, ಬರೆಯುವ ಪ್ಯಾಡ್, ಲೇಖನ ಸಾಮಗ್ರಿಗಳನ್ನು ಒದಗಿಸಲಾಗುವುದು. ತರಬೇತಿಕಾರ್ಯಕ್ರಮದಲ್ಲಿಶುದ್ಧಕುಡಿಯುವನೀರಿನವ್ಯವಸ್ಥೆಯನ್ನುಸಹಕಲ್ಪಿಸಲಾಗಿದೆ

8. ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಗಣಕ ಯಂತ್ರದ ತರಬೇತಿ ನೀಡಲಾಗುವುದೇ?
ಉತ್ತರ:- ಹೌದು. ಈ ಸಂಸ್ಥೆಯಲ್ಲಿ ಒಟ್ಟು 15 ಗಣಕ ಯಂತ್ರಗಳ ಸೌಲಭ್ಯವಿದ್ದು, ಗಣಕ ಯಂತ್ರ ತರಬೇತಿಗಳನ್ನು ಹಮ್ಮಿಕೊಳ್ಳಲಾಗುವುದು.

9. ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಹೊಸದಾಗಿ ರಚಿತವಾದ ನಿಯಮಗಳ ಬಗ್ಗೆ ಮಾಹಿತಿ ಸಿಗುವುದೇ?
ಉತ್ತರ:- ಹೌದು. ಸರಕಾರವು ಹೊಸದಾಗಿ ರಚಿಸಿದ ನಿಯಮಗಳನ್ನು ಈ ತರಬೇತಿ ಸಂಸ್ಥೆಯ ವೆಬ್ ಸೈಟ್ http://gadag.nic.in/dti/home.html ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಡೌನ್ ಲೋಡ್ ಮಾಡಿಕೊಳ್ಳಲು ಅನುವಾಗುವಂತೆ ಪ್ರಚುರಪಡಿಸಲಾಗುವುದು

10. ತರಬೇತಿಗಳಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸಾಮಾನ್ಯವಾಗಿ ಉದ್ಭವವಾ ಗುವ ಸಮಸ್ಯೆಗಳ ಪರಿಹಾರ ಹೇಗೆ?
ಉತ್ತರ:- ತರಬೇತಿ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಉದ್ಭವವಾಗುವ ಸಮಸ್ಯೆಗಳನ್ನು ಮತ್ತು ಅನುಮಾನಗಳನ್ನು ಚರ್ಚೆಗಳ ಮೂಲಕ ಬಗೆಹರಿಸಲಾಗುವುದು. ಬಗೆಹರಿಸಲಾಗದ ಪ್ರಶ್ನೆಗಳನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಲಾಗುವುದು.