MANAGEMENT COMMITTEE

ಗದಗ ಜಿಲ್ಲಾ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ಸಮಿತಿಯ ವಿವರ :

ಸರಕಾರಿ ಆದೇಶ ಸಂಖ್ಯೆ : ಸಿಆಸುಇ 164 ಇಅತ 1990 ದಿನಾಂಕ : 15-10-1990 ಹಾಗೂ ಸಂಖ್ಯೆ : ಸಿಅಸುಇ 101 ಇಅತ 2010 ದಿನಾಂಕ : 25-05-2010 ರನ್ವಯ ಸರಕಾರವು ಪ್ರತಿ ಜಿಲ್ಲೆಯ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲು ಮತ್ತು ತೀರ್ಮಾನವನ್ನು ಕೈಗೊಳ್ಳಲು ವ್ಯವಸ್ಥಾಪಕ ಸಮಿತಿಯನ್ನು ರಚಿಸಿದ್ದು, ಈ ಸಮಿತಿಗೆ ಜಿಲ್ಲಾ ತರಬೇತಿ ಸಂಸ್ಥೆ ಹೊಂದಿರುವ ಜಿಲ್ಲಾಧಿಕಾರಿಯವರನ್ನು ಅಧ್ಯಕ್ಷರೆಂದು ನೇಮಿಸಿದೆ.

ಈ ಕಾರ್ಯಾಲಯದ ಅಧಿಸೂವನೆ ಕ್ರಮಾಂಕ : ಜಿತಸಂಗ/ಸಿಬ್ಬಂದಿ.01/2011-12 ದಿನಾಂಕ : 05-07-2011 ರನ್ವಯ ಮಾನ್ಯ ಜಿಲ್ಲಾಧಿಕಾರಿಗಳು, ಗದಗ ರವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು. ಜಿಲ್ಲಾ ಪಂಚಾಯತ್,ಗದಗ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಗದಗ ಇವರನ್ನು ಸಮಿತಿಯ ಸದಸ್ಯರೆಂದು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಚಾರ್ಯರನ್ನು ಸದಸ್ಯ ಕಾರ್ಯದರ್ಶಿಯೆಂದು ನೇಮಕಾತಿ ಮಾಡಿರುತ್ತಾರೆ.

ಪ್ರತಿ ಆರ್ಥಿಕ ವರ್ಷದಲ್ಲಿ ಗದಗ ಜಿಲ್ಲೆಯಲ್ಲಿನ ಸರಕಾರಿ ನೌಕರರುಗಳಿಗೆ ಅವಶ್ಯವಾದ ತರಬೇತಿ ಕಾರ್ಯಕ್ರಮಗಳ ಅವಶ್ಯಕತೆಯನ್ನು ಗುರುತಿಸಿ ಪ್ರತಿ ಸಾಲಿನಲ್ಲಿ ಹಮ್ಮಿಕೊಳ್ಳಬೇಕಾದ ತರಬೇತಿ ಕಾರ್ಯಕ್ರಮಗಳನ್ನು ಸಿದ್ಧಪಡಿಸುವುದು ಈ ಸಮಿತಿಯ ಉದ್ದೇಶ ಮತ್ತು ಕರ್ತವ್ಯವಾಗಿದೆ.