ಗದಗ ಇತಿಹಾಸ

ಗದಗ ಜಿಲ್ಲೆ ಕರ್ನಾಟಕ, ಭಾರತದಲ್ಲಿದೆ. ಈ ಜಿಲ್ಲೆಯು 1997 ರಲ್ಲಿ ಧಾರವಾಡ ಜಿಲ್ಲೆಯಿಂದ ವಿಭಜನೆಯಾಯಿತು. 2011 ರ ಪ್ರಕಾರ, ಗದಗ ಜಿಲ್ಲೆ 971,952 ಜನಸಂಖ್ಯೆಯನ್ನು ಹೊಂದಿತ್ತು (ಅದರಲ್ಲಿ ಶೇ. 35.21 ರಷ್ಟು ನಗರವಾಗಿತ್ತು). 1991 ರಿಂದ 2001 ರವರೆಗಿನ ಒಟ್ಟಾರೆ ಜನಸಂಖ್ಯೆ 13.14 ರಷ್ಟು ಏರಿಕೆಯಾಗಿದೆ. ಗದಗ ಜಿಲ್ಲೆ ಉತ್ತರದಲ್ಲಿ ಬಾಗಲಕೋಟೆ ಜಿಲ್ಲೆ, ಪೂರ್ವದಲ್ಲಿ ಕೊಪ್ಪಳ ಜಿಲ್ಲೆ, ಆಗ್ನೇಯ ದಿಕ್ಕಿನಲ್ಲಿರುವ ಬಳ್ಳಾರಿ ಜಿಲ್ಲೆ, ನೈಋತ್ಯದ ಹಾವೇರಿ ಜಿಲ್ಲೆ, ಪಶ್ಚಿಮದಲ್ಲಿ ಧಾರವಾಡ ಜಿಲ್ಲೆ ಮತ್ತು ವಾಯುವ್ಯದಲ್ಲಿ ಬೆಳಗಾವಿ ಜಿಲ್ಲೆಗಳಿಂದ ಆವೃತವಾಗಿದೆ. ಗದಗ ಜಿಲ್ಲೆಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಸ್ಮಾರಕಗಳನ್ನು (ಮುಖ್ಯವಾಗಿ ಜೈನ ಮತ್ತು ಹಿಂದೂ ದೇವಾಲಯಗಳು) ಹೊಂದಿದೆ. ಗದಗ ಜಿಲ್ಲೆ ಏಳು ತಾಲೂಕುಗಳನ್ನೊಳಗೊಂಡಿದೆ . ಗದಗ-ಬೆಟಗೇರಿ, ರೋಣ, ಶಿರಹಟ್ಟಿ, ನರಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ ಮತ್ತು ಮುಂಡರಗಿ ಮುಂತಾದವು.

ಐತಿಹಾಸಿಕ ಸ್ಥಳಗಳು

ಗದಗ :

ಪಟ್ಟಣವು 11 ನೇ ಮತ್ತು 12 ನೇ ಶತಮಾನದ ಸ್ಮಾರಕಗಳನ್ನು ಹೊಂದಿದೆ; ವೀರ ನಾರಾಯಣ ಮತ್ತು ತ್ರಿಕುಟೇಶ್ವರ ಸಂಕೀರ್ಣದ ದೇವಾಲಯವು ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಾಗಿವೆ. ಜೈನ ಪರಂಪರೆಯ ಎರಡು ದೇವಾಲಯಗಳಲ್ಲಿ ಒಂದು ಮಹಾವೀರನಿಗೆ ಸಮರ್ಪಿತವಾಗಿದೆ.

ತ್ರಿಕುಟೇಶ್ವರ ದೇವಾಲಯದ ಸಂಕೀರ್ಣ ::

ಚಾಲುಕ್ಯರ ವಾಸ್ತುಶೈಲಿಯಲ್ಲಿ, ಆರನೆಯ ಮತ್ತು ಎಂಟನೇ ಶತಮಾನದ ನಡುವಿನ ಅವಧಿಯಲ್ಲಿ ತ್ರಿಕುಟೇಶ್ವರ ದೇವಸ್ಥಾನವನ್ನು ನಿರ್ಮಿಸಲಾಯಿತು. ಈ ದೇವಾಲಯವನ್ನು ಸರಸ್ವತಿಗೆ ಸಮರ್ಪಿಸಲಾಗಿದೆ.

ವೀರನಾರಾಯಣ ದೇವಸ್ಥಾನ ::

11 ನೇ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯವು ವರ್ಷಕ್ಕೆ ಅನೇಕ ಭಕ್ತರನ್ನು ಆಕರ್ಷಿಸುತ್ತದೆ. 

ಜುಮ್ಮಾ ಮಸೀದಿ:

ಜಮ್ಮಾ ಮಸೀದಿ 600 ಜನರ ಸಾಮರ್ಥ್ಯ ಹೊಂದಿದೆ. 17 ನೇ ಮತ್ತು 18 ನೇ ಶತಮಾನಗಳಲ್ಲಿ, ಬ್ರಿಟಿಷರ ಪೂರ್ವದಲ್ಲಿ ಗದಗನ್ನು ಮುಸ್ಲಿಮ್ ರಾಜರು ಮತ್ತು ಮರಾಠರು ಆಳ್ವಿಕೆ ನಡೆಸಿದರು.

ಲಕ್ಷ್ಮೇಶ್ವರ:

ಲಕ್ಷ್ಮೇಶ್ವರವು ಹಿಂದೂ, ಜೈನ ದೇವಾಲಯಗಳು ಮತ್ತು ಮಸೀದಿಗಳಿಗೆ ಹೆಸರುವಾಸಿಯಾಗಿದೆ. ಸೋಮೇಶ್ವರ ದೇವಾಲಯದ ಸಂಕೀರ್ಣದಲ್ಲಿ ಹಲವಾರು ಶಿವ ದೇವಾಲಯಗಳನ್ನು ಹೊಂದಿದೆ.

ಸೂಡಿ:

ಚಾಲುಕ್ಯ ಸ್ಮಾರಕಗಳಲ್ಲಿ ಜೋಡಿ ಗೋಪುರ, ಮಲ್ಲಿಕಾರ್ಜುನ ದೇವಾಲಯ, ದೊಡ್ಡ ಗಣೇಶ ಮತ್ತು ನಂದಿ ಪ್ರತಿಮೆಗಳು ಸೇರಿವೆ.

ಲಕ್ಕುಂಡಿ:

ಗದಗದಿಂದ 12 ಕಿಲೋಮೀಟರ್ (7.5 ಮೈಲು) ದೂರದಲ್ಲರುವ ಲಕ್ಕುಂಡಿ ಚಾಲುಕ್ಯರ ರಾಜರ ನಿವಾಸವಾಗಿತ್ತು. ಇದು 101 ಮಟ್ಟಿಲುಗಳ ಕಲ್ಯಾಣಿ ( ಪುಷ್ಕರ್ಣಿ ) ಮತ್ತು ಹಿಂದೂ ಮತ್ತು ಜೈನ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. ಭಾರತೀಯ ಪುರಾತತ್ವ ಇಲಾಖಯಿಂದ ಪುರಾತನ ಶಿಲ್ಪ ಶಾಸನಗಳ ಗ್ಯಾಲರಯನ್ನು ನಿರ್ವಹಿಸಲಾಗುತ್ತಿದೆ.

ಡಂಬಳ:

12 ನೇ ಶತಮಾನದ ಚಾಲುಕ್ಯ ದೊಡ್ಡಬಸಪ್ಪ ದೇವಸ್ಥಾನಕ್ಕೆ ಡಂಬಳ ಹೆಸರುವಾಸಿಯಾಗಿದೆ.

ಗಜೇಂದ್ರಗಡ:

ಗಜೇಂದ್ರಗಡ, ಬೆಟ್ಟದ ಕೋಟೆ ಮತ್ತು ಕಾಲಾಕಾಲೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.

ಹರ್ತಿ:

ಹರ್ತಿ ಹಲವಾರು ಹಿಂದೂ ದೇವಾಲಯಗಳನ್ನು ಹೊಂದಿದ್ದು  ಶ್ರೀ ಬಸವೇಶ್ವರ ದೇವಸ್ಥಾನ, ಪಾರ್ವತಿ ಪರಮೇಶ್ವರ ದೇವಸ್ಥಾನ (ಉಮಾ ಮಹೇಶ್ವರ ದೇವಸ್ಥಾನ) ನಂತಹ ಇತರ ದೇವಾಲಯಗಳು ಚಾಲುಕ್ಯರ ಕಾಲದ ಕಲ್ಲಿನ ಕೆತ್ತನೆಗಳನ್ನು ಹೊಂದಿವೆ.

ಕೊಟುಮಚಿಗಿ:

ಗದಗದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿರುವ ಕೃಷಿ ಗ್ರಾಮವು ಸೋಮೇಶ್ವರ ಮತ್ತು ದುರ್ಗಾ ದೇವಿ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಪ್ರಭುಲಿಂಗಲೀಲೆ ಲೇಖಕ, ಚಾಮರಸ ಕೊಟುಮಚಿಗಿಯ ಹತ್ತಿರದ ನಾರಾಯಣಪುರದಲ್ಲಿ ಜನಿಸಿದ್ದರು.

ನರೇಗಲ್:

ರಾಷ್ಟ್ರಕೂಟ ವಂಶದವರು ನಿರ್ಮಿಸಿದ ಅತಿದೊಡ್ಡ ಜೈನ ದೇವಾಲಯಕ್ಕೆ ನೆಲೆಯಾಗಿದೆ.

ರೋಣ :

ರೋಣದ ಐತಿಹಾಸಿಕ ಸ್ಮಾರಕಗಳೆಂದರೆ ಅನಂತಶಾಯೀ ಗುಡಿ, ಈಶ್ವರ ದೇವಾಲಯ, ಕಲಾ ಗುಡಿ, ಲೋಕನಾಥ ದೇವಾಲಯ, ಮಲ್ಲಿಕಾರ್ಜುನ ದೇವಸ್ಥಾನ, ಪಾರ್ಶ್ವನಾಥ ಜೈನ ಮಂದಿರ ಮತ್ತು ಸೋಮಲಿಂಗೇಶ್ವರ ದೇವಸ್ಥಾನ.

ಕುರ್ತಕೋಟಿ :

ಗದಗದಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿರುವ ಕೃಷಿ ಗ್ರಾಮವು ಶ್ರೀ ಉಗ್ರ ನರಸಿಂಹ, ದತ್ತಾತ್ರೇಯ, ವಿರೂಪಾಕ್ಷಲಿಂಗ ಮತ್ತು ರಾಮ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. ರಾಮ, ಲಕ್ಷ್ಮಣ ಮತ್ತು ಸೀತೆಯ ಪ್ರತಿಮೆಗಳನ್ನು ಬ್ರಹ್ಮ ಚೈತನ್ಯರು ಸ್ಥಾಪಿಸಿದರು. ಬರಹಗಾರ ಮತ್ತು ವಿಮರ್ಶಕ ಕೀರ್ತಿನಾಥ್ ಕುರ್ತಕೋಟಿಯವರು ಈ ಪ್ರದೇಶದವರಾಗಿದ್ದಾರೆ.

ನರಗುಂದ :

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಖ್ಯಾತಿಯ ನರಗುಂದದ ಬಾಬಾಸಾಹೇಬ ಈ ಪ್ರದೇಶದಿಂದ ಖ್ಯಾತನಾಮರಾಗಿದ್ದಾರೆ.

ದೊಣಿ ::

ಗದಗ ನಿಂದ 24 ಕಿಲೋಮೀಟರ್ ದೂರದಲ್ಲಿದೆ ಮತ್ತು ಗಾಳಿ-ಶಕ್ತಿ ಉತ್ಪಾದನೆಗೆ ಹೆಸರುವಾಸಿಯಾಗಿದೆ

ಬೆಳಧಡಿ

ಗದಗದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದ್ದು, ಶ್ರೀ ರಾಮ ದೇವಸ್ಥಾನ ಮತ್ತು ಶ್ರೀ ರಾಮ, ಲಕ್ಷ್ಮಣ ಮತ್ತು ಸೀತಾಗಳ ಪ್ರತಿಮೆಗಳಿಗೆ ಹೆಸರುವಾಸಿಯಾಗಿದೆ.

ಅಂತೂರ್ ಬೆಂತೂರ್ :

ಗದಗದಿಂದ ಸುಮಾರು 23 ಕಿಲೋಮೀಟರ್ ದೂರದಲ್ಲಿ, ಕೃಷಿ ಗ್ರಾಮವು ಶ್ರೀ ಜಗದ್ಗುರು ಬಡಿಮಹಾಸ್ವಾಮಿಗಳ ಸಂಸ್ಥಾನ ಮಠಕ್ಕೆ ಹೆಸರುವಾಸಿಯಾಗಿದೆ. ಈ ಮಠವನ್ನು ಮುಸ್ಲಿಮರು ಮತ್ತು ಹಿಂದೂಗಳು ನೋಡಿಕೊಳ್ಳುತ್ತಾರೆ.

ಜನಸಂಖ್ಯಾಶಾಸ್ತ್ರ:

2011 ರ ಜನಗಣತಿಯ ಪ್ರಕಾರ ಜಿಲ್ಲೆಯ 1,065,235 ಜನಸಂಖ್ಯೆಯನ್ನು ಹೊಂದಿದೆ. ಇದು ಭಾರತದಲ್ಲಿ 426 ನೇ ಸ್ಥಾನದಲ್ಲಿದೆ (ಒಟ್ಟು 640 ರಲ್ಲಿ). ಜಿಲ್ಲೆಯ ಪ್ರತಿ ಚದರ ಕಿಲೋಮೀಟರಿಗೆ 229 ನಿವಾಸಿಗಳ ಜನಸಂಖ್ಯಾ ಸಾಂದ್ರತೆ ಇದೆ (590 / ಚದರ ಮೈಲಿ). ಇದರ ಜನಸಂಖ್ಯಾ ಬೆಳವಣಿಗೆ ದರವು 2001 ರಿಂದ 2011 ರವರೆಗೆ 9.61 ರಷ್ಟು ಇತ್ತು. ಜಿಲ್ಲೆಯ ಪ್ರತಿ 1000 ಪುರುಷರಿಗೆ 978 ಮಹಿಳೆಯರು ಲಿಂಗ ಅನುಪಾತ ಮತ್ತು 75.18 ಪ್ರತಿಶತದಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ.

ಮಾಗಡಿ ಪಕ್ಷಿ ಧಾಮ:

ಮಾಗಡಿ ಪಕ್ಷಿ ಧಾಮವು ಮಾಗಡಿ ಜಲಾಶಯದಲ್ಲಿ ರಚಿಸಲ್ಪಟ್ಟಿದೆ, ವಲಸೆ ಜಾತಿಯ ಪಕ್ಷಿಗಳಿಗೆ ಹೆಸರುವಾಸಿಯಾಗಿದೆ.

ಗಮನಾರ್ಹ ನಿವಾಸಿಗಳು:
  • 1. ಕವಿ ಕುಮಾರವ್ಯಾಸ (ಕೊಳಿವಾಡಾದಲ್ಲಿ ಜನನ) ಮತ್ತು ಚಾಮರಸರು ಅನುಕ್ರಮವಾಗಿ ಕನ್ನಡದಲ್ಲಿ ಮಹಾಭಾರತ (ಕರ್ನಾಟಕ ಭಾರತ ಕಥಾಮಂಜರಿ) ಮತ್ತು ಪ್ರಭುಲಿಂಗಲೀಲೆಯನ್ನು ರಚಿಸಿದ್ದಾರೆ.
  • 2. ಗಾನಯೋಗಿ ಪಂಚಾಕ್ಷರಿ ಗವಾಯಿಗಳು
  • 3. ಹಿಂದೂಸ್ತಾನಿ ಗಾಯಕ ಭಾರತ್ ರತ್ನ ಭೀಮಸೇನ ಜೋಷಿ
  • 4. ಪಂ. ಪುಟ್ಟರಾಜ ಗವಾಯಿಗಳು
  • 5. ರಾಜಗುರು ಗುರುಸ್ವಾಮಿ ಕಲ್ಕೆರಿ
  • 6. ಸುನೀಲ್ ಜೋಶಿ (ಕ್ರಿಕೆಟಿಗ)
  • 7. ಸೈಯದ್- ಶಾ-ಸೋಫಿಸಾಬ್ ಅಲಿಯಾಸ್ ಡಾ. ಡಿ.ಬಿ ಪೀರ್ಜಾದೆ

ಅಧಿಸೂಚನೆಗಳು | ಎಲ್ಲವನ್ನೂ ವೀಕ್ಷಿಸಿ

ಸೀಮೆಎಣ್ಣೆ ಪಡೆಯುವ ವಿಧಾನಗಳು

  • 1. ನೋಂದಾಯಿತ ಮೋಬೈಲ್ ನಿಂದ RCKERO ಎಂದು ಎಸ್.ಎಂ.ಎಸ್ 9731979899 ಗೆ ಕಳುಹಿಸಿ ಕೂಪನ್ ಕೋಡ್ ಪಡೆಯಬಹುದು ಮತ್ತು ಸೀಮೆಎಣ್ಣೆ ಅಂಗಡಿಗೆ ತೋರಿಸಬೇಕು. ಪಡಿತರ ಚೀಟಿಯನ್ನು ಕುಟುಂಬದ ಒಬ್ಬರು ಸದಸ್ಯರ ಆಧಾರ್ ಗೆ ಜೋಡಣೆ ಮಾಡಿರಬೇಕು ಅಥವಾ
  • 2. ಫೋಟೋ ಬಯೋ ಕೇಂದ್ರವನ್ನು (ಬೆಂಗಳೂರು ಒನ್, ಖಾಸಗಿ ಸೇವಾ ಕೇಂದ್ರ ಇತ್ಯಾದಿ) ಸಂಪರ್ಕಿಸಿ ಬೆರಳಚ್ಚು ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು ಅಥವಾ
  • 3. ಇಲಾಖೆ ವೆಬ್ ಸೈಟ್ ( http://ahara.kar.nic.in ) ಭೇಟಿನೀಡಿ ಒಟಿಪಿ ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು

ಸಾಮಾಜಿಕ ಮಾಧ್ಯಮ

ಕಾರ್ಯಕ್ರಮಗಳು

ತ್ವರಿತ ಪ್ರವೇಶ

www.gadag.nic.in ಒಂದು ತ್ವರಿತ ಪ್ರವೇಶಕ್ಕಾಗಿ ನಿಮ್ಮ ಮೊಬೈಲ್ ಕ್ಯಾಮೆರಾ / QR ರೀಡರ್ ಬಳಸಿ ಈ QR ಓದಿ