Close

ಉಪವಿಭಾಗ

ಸಹಾಯಕ ಕಮಿಷನರ್ ಕಚೇರಿ

 

ಉಪ ವಿಭಾಗೀಯ ಅಧಿಕಾರಿಗಳನ್ನು ಕಂದಾಯ ಇಲಾಖೆಯ ಜಿಲ್ಲೆಯ ನಿಗದಿತ ತಾಲೂಕುಗಳ ಉಸ್ತುವಾರಿ ವಹಿಸಲಾಗುತ್ತದೆ. ಅವರು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಸಹ. ಕಂದಾಯ ವಿಷಯಗಳ ಬಗ್ಗೆ ತಹಶೀಲ್ದಾರರು ಉಪ-ವಿಭಾಗೀಯ ಅಧಿಕಾರಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿರುತ್ತಾರೆ. ಉಪವಿಭಾಗಗಳ ಉಸ್ತುವಾರಿ ವಹಿಸಿರುವ ಸಹಾಯಕ ಕಮಿಷನರ ಡಿ.ಸಿ.ಯ ಅಧಿಕಾರಗಳನ್ನು ಹೊಂದಿರುತ್ತಾರೆ. ಎಸಿ ತನ್ನ ಆಧೀನದಲ್ಲಿ ಕಾರ್ಯನಿರ್ವಹಿಸುವ ಕಂದಾಯ ಅಧಿಕಾರಿಗಳ ಮೊದಲ ಮೇಲ್ಮನವಿ ಪ್ರಾಧಿಕಾರಿಯು ಮತ್ತು ಕರ್ನಾಟಕ ಭೂಕಂದಾಯ ಕಾಯಿದೆ 1694 ರ ಸೆಕ್ಷನ್ 56 ರ ಪರಿಕ್ಷರಣೆ ಅಧಿಕಾರ ಹೊಂದಿರುತ್ತಾರೆ. SDO ಸಾಮಾನ್ಯವಾಗಿ ತನ್ನ ಉಪ-ವಿಭಾಗಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಕೆಲಸವನ್ನು ನಿರ್ವಹಿಸಿತ್ತಾರೆ ಮತ್ತು 1961 ರಲ್ಲಿ ಕರ್ನಾಟಕ ಜಮೀನು ಸುಧಾರಣೆ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಟ್ರಿಬ್ಯೂನಲ್ಗಳ ಅಧ್ಯಕ್ಷರು ಆಗಿರುತ್ತಾರೆ. ವಿಶೇಷ ಭೂಮಿ ಸ್ವಾಧೀನ ಅಧಿಕಾರಿಗಳನ್ನು SDO ತನ್ನ ಸಾಮಾನ್ಯ ಕೆಲಸದೊಂದಿಗೆ ನಿರ್ವಹಿಸಬೇಕು. ಎಸಿಗಳು ತಮ್ಮ ಉಪ ವಿಭಾಗದ ಚುನಾವಣಾ ನೋಂದಣಿ ಅಧಿಕಾರಿಗಳಾಗಿರುತ್ತಾರೆ. SDO ತನ್ನ ಉಪ-ವಿಭಾಗದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಸೆಂಬ್ಲಿ ಕ್ಷೇತ್ರಗಳಿಗೆ ರಿಟರ್ನಿಂಗ್ ಆಫೀಸರ್ ಆಗಿರುತ್ತಾರೆ.

ಅಧಿಕಾರಿಗಳು ಕಚೇರಿ ಕಚೇರಿ ವಿಳಾಸ ಇ-ಮೇಲ್ ದೂರವಾಣಿ ಸಂಖ್ಯೆ
ಸಹಾಯಕ ದಂಡಾಧಿಕಾರಿಗಳು ಸಹಾಯಕ

ದಂಡಾಧಿಕಾರಿಗಳ ಕಚೇರಿ

ದಂಡಾಧಿಕಾರಿ ಕಚೇರಿ, ಮುಳಗುಂದ ನಾಕಾದ ಹತ್ತಿರ,

ಗದಗ – 583231

acgadag@gmail[dot]com