ಸುರಕ್ಷಿತ ಇಂಟರ್ನೆಟ್ ದಿನ – ಫೆಬ್ರವರಿ 11
ಒಗ್ಗಟ್ಟಿನಿಂದ ಉತ್ತಮ ಇಂಟರ್ನೆಟ್
ಸುರಕ್ಷಿತ ಇಂಟರ್ನೆಟ್ ದಿನದ ಮಹತ್ವವೇನು?
ನಮ್ಮ ದಿನನಿತ್ಯದ ಜೀವನದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿರುವಂತೆ, ಸೈಬರ್ ಅಪಾಯಗಳಾದ ಹ್ಯಾಕಿಂಗ್, ಫಿಷಿಂಗ್ (Phishing), ಗುರುತಿನ ಸುಲಿಗೆ (Identity Theft), ಸೈಬರ್ ಬುಲ್ಲಿಯಿಂಗ್ (Cyberbullying), ತಪ್ಪು ಮಾಹಿತಿಯ ಹರಿವು (Misinformation), ಆನ್‌ಲೈನ್ ವಂಚನೆಗಳು (Online Scams) ಕೂಡ ಹೆಚ್ಚುತ್ತಿವೆ.
ಇಂತಹ ಅಪಾಯಗಳನ್ನು ಬಹಳಷ್ಟು ಜನರು, ವಿಶೇಷವಾಗಿ ಮಕ್ಕಳು, ಅರಿಯದೆ ಬಲಿಯಾಗುವ ಸಾಧ್ಯತೆ ಹೆಚ್ಚು. ಸುರಕ್ಷಿತ ಇಂಟರ್ನೆಟ್ ದಿನವು ಈ ಅಪಾಯಗಳನ್ನು ಜನರಿಗೆ ತಿಳಿಸುವುದರೊಂದಿಗೆ, ಆನ್‌ಲೈನ್ ಸುರಕ್ಷತೆಗಾಗಿ ಉತ್ತಮ ಅಭ್ಯಾಸಗಳನ್ನು ಅನುಸರಿಸಲು ಪ್ರೇರೇಪಿಸುತ್ತದೆ.
ಸುರಕ್ಷಿತ ಇಂಟರ್ನೆಟ್ ದಿನದ ಮುಖ್ಯ ಉದ್ದೇಶಗಳು
1. ಬಳಕೆದಾರರಿಗೆ ಶಿಕ್ಷಣ ನೀಡುವುದು – ಸೈಬರ್ ಅಪಾಯಗಳು ಮತ್ತು ಆನ್‌ಲೈನ್ ಸುರಕ್ಷಿತ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವುದು.
2. ಗೌಪ್ಯತೆ (Privacy) ರಕ್ಷಣೆಯನ್ನು ಉತ್ತೇಜಿಸುವುದು – ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯ ಸುರಕ್ಷತೆಗೆ ಪ್ರಾಮುಖ್ಯತೆ ನೀಡುವುದು.
3. ಸೈಬರ್ ಅಪರಾಧಗಳನ್ನು ತಡೆಯುವುದು – ಜನರು ಹ್ಯಾಕಿಂಗ್, ಫಿಷಿಂಗ್, ಆನ್‌ಲೈನ್ ವಂಚನೆಗಳ ಬಗ್ಗೆ ಅರಿವು ಪಡೆದು ಮುನ್ನೆಚ್ಚರಿಕೆ ವಹಿಸಲು ಪ್ರೇರೇಪಿಸುವುದು.
4. ಮಕ್ಕಳಿಗೆ ಹಾಗೂ ಪೋಷಕರಿಗೆ ಸಬಲತೆ ನೀಡುವುದು – ಮಕ್ಕಳು ಆನ್‌ಲೈನ್ ಅಪಾಯಗಳಿಂದ ಎಚ್ಚರಿಕೆಯಿಂದ ಇರಲು ಮಾರ್ಗದರ್ಶನ ನೀಡುವುದು ಮತ್ತು ಪೋಷಕರಿಗೆ ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಬೇಕಾದ ಸಲಹೆಗಳನ್ನು ನೀಡುವುದು.
5. ಜವಾಬ್ದಾರಿಯುತ ಡಿಜಿಟಲ್ ನಡವಳಿಕೆಯನ್ನು ಉತ್ತೇಜಿಸುವುದು – ಆನ್‌ಲೈನ್‌ನಲ್ಲಿ ನೈತಿಕವಾಗಿ ನಡೆದುಕೊಳ್ಳಲು ಮತ್ತು ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತವಾಗಿ ಬಳಸಲು ಪ್ರೇರೇಪಿಸುವುದು.
ನಾವು ಒಗ್ಗೂಡಿ, ಇಂಟರ್ನೆಟ್ ಅನ್ನು ಸುರಕ್ಷಿತ, ಉತ್ತಮ ಮತ್ತು ಎಲ್ಲರಿಗೂ ಸಹಾಯಕರಾಗುವಂತೆ ಮಾಡೋಣ!