ಇತಿಹಾಸ ಕಾಲದ ಒಂದು ಪುಟ್ಟ ನಗರ ಕರ್ನಾಟಕದ ಪಶ್ಚಿಮ ಮೂಲೆಯಲ್ಲಿ ನೂಕಿದಂತಿದೆ. ಈ ಗದಗ ಪಟ್ಟಣ. ಸುಮಾರು 4656 ಚದರ ಕಿ.ಮೀ ವ್ಯಾಪ್ತಿಯ ಸಣ್ಣ ಪಟ್ಟಣಕ್ಕೆ ಯಥೇಚ್ಛವಾಗಿಯೇನೂ ಪ್ರವಾಸಿಗರು ಬರುವುದಿಲ್ಲ. ಆದರೆ ಗದಗದಲ್ಲಿ ನೋಡುವಂಥ ವಿಶಿಷ್ಟ ವಾಸ್ತುಶಿಲ್ಪಳಿವೆ, ವಿವಿಧ ಶೈಲಿಯ ದೇವಸ್ಥಾನಗಳಿವೆ.
ಗದಗನಲ್ಲಿ ಏನಿದೆ ?
ಗದಗನಲ್ಲಿರುವ ದೇವಸ್ಥಾನಗಳು ಚಾಲುಕ್ಯರ ಕಾಲದ ಕಲೆಗೆ ಸೂಕ್ತ ಉದಾಹರಣೆಗಳು. ಇಲ್ಲಿ ವಾಸ್ತುಶಿಲ್ಪಗಳು ತನ್ನದೇ ವಿಶಿಷ್ಟ ಶೈಲಿಯನ್ನು ಹೊಂದಿದೆ ಹಾಗೂ ಕಲ್ಲಿನ ದಪ್ಪ ದಪ್ಪ ಗೋಡೆಗಳು ಮತ್ತು ದೇವಸ್ಥಾನದ ಗೋಡೆಗಳ ಮೇಲಿನ ಕೆತ್ತನೆಗಳು ನಿಮ್ಮನ್ನು ದಶಕಗಳಷ್ಟು ಹಿಂದೆ ಕರೆದುಕೊಂಡು ಹೋಗುತ್ತವೆ.
ಗದಗನಲ್ಲಿ ನೋಡಲೇಬೇಕಾದ ಮತ್ತು ಅತ್ಯಂತ ಜನಪ್ರಿಯ ತಾಣ ಎಂದರೆ ತ್ರಿಕೂಟೇಶ್ವರ ದೇವಸ್ಥಾನ. ಇದು ಕೇವಲ ವಾಸ್ತುಶಿಲ್ಪವಲ್ಲ, ಜನರನ್ನ ತನ್ನತ್ತ ಸೆಳೆಯುವ ಆಯಸ್ಕಾಂತ. ಶಿವ, ಬ್ರಹ್ಮ ಮತ್ತು ವಿಷ್ಣುವಿನ ಮೂರ್ತಿಗಳು ಇಲ್ಲಿ ವಿರಾಜಿಸಿವೆ. ಈ ದೇವಸ್ಥಾನಕ್ಕೆ ಧಾರ್ಮಿಕ ಪ್ರಾಮುಖ್ಯತೆಯೂ ಇದೆ. ಗದಗನಲ್ಲಿ ನೋಡಬಹುದಾದ ಇತರ ದೇವಸ್ಥಾನಗಳೆಂದರೆ ವೀರ ನಾರಾಯಣ, ಡಂಬಳ ಮತ್ತು ಕಾಶಿವಿಶ್ವೇಶ್ವರ ದೇವಸ್ಥಾನಗಳು.
ಆದರೆ ಗದಗಕ್ಕೆ ನೀವು ದೇವಸ್ಥಾನ ಮತ್ತು ವಾಸ್ತುಶಿಲ್ಪವನ್ನು ಮಾತ್ರ ನೋಡಲು ಬರಬೇಕೆಂದಿದ್ದರೆ ಖಂಡಿತವಾಗಿಯೂ ತಪ್ಪು. ಇಲ್ಲಿರುವ ಮಾಗಡಿ ಪಕ್ಷಿ ಧಾಮದಲ್ಲಿ ಪರಿಸರ ಪ್ರಿಯರು ಹಕ್ಕಿಗಳ ಕಲರವವನ್ನು ಆಸ್ವಾದಿಸಬಹುದು. ಈ ಪಕ್ಷಿಧಾಮವು ಗದಗ ನಿಂದ ಸುಮಾರು 26 ಕಿ.ಮೀ ದೂರದಲ್ಲಿದೆ. ಗದಗಕ್ಕೆ ರೈಲಿನ ಮೂಲಕ ಉತ್ತಮ ಸಂಪರ್ಕವಿದ್ದು, ಇಲ್ಲಿ ರೈಲ್ವೆ ಸ್ಟೇಷನ್ ಕೂಡ ಇದೆ. ಹತ್ತಿರದ ವಿಮಾನ ನಿಲ್ದಾಣವು 64 ಕಿ.ಮಿ ದೂರದಲ್ಲಿರುವ ಹುಬ್ಬಳ್ಳಿಯಲ್ಲಿದೆ.