Close

ಕೋವಿಡ್‌೧೯

CoBa

ಕೋವಿಡ್ 19 ಬಗ್ಗೆ :

2019 -ಎನ್ ಕೋವ್ ಅಥವಾ 2019 ನಾವೆಲ್ ಕರೋನಾ ವೈರಸ್ ಕೋವಿಡ್ -19 ಎಂದೂ ಕರೆಯಲ್ಪಡುವ ಈ ವೈರಸ್ ಮೊದಲಿಗೆ ಚೈನಾದ ವುಹಾನ್ ನಗರದಲ್ಲಿ ಡಿಸೆಂಬರ್ 2019 ರಲ್ಲಿ ಗುರುತಿಸಲ್ಪಟ್ಟಿತು. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ಯಾಂಡಿಮೀಕ್(ಸಾಂಕ್ರಾಮಿಕ) ಕಾಯಿಲೆ ಎಂದು ಗುರುತಿಸಿ 11 ಮಾರ್ಚ್ 2020 ರಂದು ಘೋಷಿಸಿದೆ. ಕೋವಿಡ್ 2019 ಕರೋನಾ ವೈರಸ್ ಗುಂಪಿಗೆ ಸೇರಿದ ಈ ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ.

ಅರಿಯಿರಿ :

ಈ ವೈರಸ್ ಪ್ರಮುಖವಾಗಿ ಸೋಂಕುಳ್ಳ ವ್ಯಕ್ತಿಯ ಸಂಪರ್ಕದಲ್ಲಿದ್ದಾಗ ಅವರುಗಳ ಕೆಮ್ಮು ಅಥವಾ ಸೀನಿನಿಂದ ಆ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ಸಾಮಾಜಿಕ ಅಂತರ ಕಾಯ್ದಿಟ್ಟುಕೊಳ್ಳುವ ಮೂಲಕ (ಅಂದರೆ ಕನಿಷ್ಟ ಆರು ಫೀಟ್ ಅಂತರ) ಮತ್ತು ಕೆಮ್ಮುವಾಗ ಕೈಯ್ಯನ್ನು ಬಾಯಿಗೆ ಅಡ್ಡ ಹಿಡಿದುಕೊಳ್ಳುವ ಮೂಲಕ ಈ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿದೆ.

ಮುನ್ನೆಚ್ಚರಿಕೆ :

  • ಆಗಾಗ ಕನಿಷ್ಠ 20 ಸೆಕೆಂಡ್ ಗಳ ಕಾಲ ಸೊಪಿನಿಂದ ಕೈ ಗಳನ್ನು ತೊಳೆಯುವುದು.
  • ಯಾವುದಾದರೂ ಹೊರಗಿನ ವಸ್ತುಗಳನ್ನ ಮುಟ್ಟಿದ ನಂತರ ಕೂಡಲೆ ಸ್ಯಾನಿಟೈಜರ್ಗಳನ್ನ ಬಳಸಿ ನಿಮ್ಮ ಕೈಗಳನ್ನು ಉಜ್ಜಿಕೊಳ್ಳಿ
  • ಕೈ ತೊಳೆಯದೆ ನಿಮ್ಮ ಮುಖ ( ಕಣ್ಣು , ಮೂಗು, ಬಾಯಿ) ಇವುಗಳನ್ನು ಮುಟ್ಟುವುದನ್ನು ತಡೆಯಿರಿ
  • ಮನೆಯಲ್ಲಿಯೇ ಇರಿ ಮತ್ತು ಕಾಯಿಲೆ ಇರುವ ವ್ಯಕ್ತಿಗಳ ಜೊತೆ ಅತಿ ಹತ್ತಿರದ ಸಂಪರ್ಕ ಬೇಡ
  • 60 ವರ್ಷ ಮೇಲ್ಪಟ್ಟ ಮತ್ತು ಹತ್ತು ವರ್ಷದ ಕೆಳಗಿನವರುಗಳು ಈ ವೈರಸ್ ಸೋಂಕಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ವಯಸ್ಸಿನವರ ಜೊತೆ ಹತ್ತಿರದ ಸಂಪರ್ಕವನ್ನು ತಡೆಯುವುದು ಉತ್ತಮ
  • ಕೆಮ್ಮುವಾಗ ಅಥವ ಸೀನುವಾಗ ಟಿಶ್ಯೂ ವನ್ನು ಅಡ್ಡ ಹಿಡಿದುಕೊಂಡರೆ ಆ ಕೂಡಲೇ ಅವುಗಳನ್ನು ಒಂದು ಸಣ್ಣ ಚೀಲದಲ್ಲಿ ಕಟ್ಟಿ ಪ್ರತ್ಯೇಕವಾಗಿ ಎಸೆಯಿರಿ.
  • ನಿಮ್ಮ ಮನೆ, ಆಫೀಸಿನ ಸೋಫಾಗಳನ್ನು, ಟೇಬಲ್, ಬಾಗಿಲು, ಬಾಗಿಲಿನ ಹಿಡಿಕೆ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗಾಗ ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುತ್ತಿರಿ.
  • ಕೊರಿಯರ್ ಅಥವಾ ಯಾವುದೇ ಪಾರ್ಸೆಲ್ ಪಡೆಯುವಾಗ ಸಾಧ್ಯವಿದ್ದಲ್ಲಿ ಅವುಗಳನ್ನು ಒಂದೆಡೆ ಇರಿಸಲು ಹೇಳಿ. ಕೈಗಳಿಂದ ಪಡೆಯವುದನ್ನು ಆದಷ್ಟೂ ತಪ್ಪಿಸಿ ತೊಳೆಯುವಂತಹುದಾದರೆ ತೊಳೆದು ತೆಗೆದಕೊಳ್ಳಿ ಇಲ್ಲವಾದಲ್ಲಿ ಸ್ವಲ್ಪ ಘಂಟೆಗಳ ಕಾಲ ಮುಟ್ಟದೇ ಹಾಗೆಯೇ ಇಟ್ಟು ನಂತರ ಪಾರ್ಸೆಲ್ ಅಥವಾ ಕೊರಿಯರ್ ತೆರೆಯಬಹುದು
ಸಹಾಯವಾಣಿ
ಆರೋಗ್ಯ ಸೇತು IVRS ನಾಗರಿಕರು 1921 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು. ಕರೆ ಸಂಪರ್ಕ ಕಡಿತಗೊಳ್ಳುತ್ತದೆ ಮತ್ತು ನಾಗರಿಕರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಒಳಹರಿವುಗಳನ್ನು ಕೋರಿ ಕಾಲ್ ಬ್ಯಾಕ್ ಸ್ವೀಕರಿಸುತ್ತಾರೆ. 1921
ಜಿಲ್ಲಾ ಸಹಾಯವಾಣಿ ಸಂಖ್ಯೆ 08372-239177
ಕರ್ನಾಟಕ ಸರ್ಕಾರದ ಆರೋಗ್ಯ ಸಹಾಯವಾಣಿ ಸಂಖ್ಯೆಗಳು: 104, 080-46848600, 080-66692000, 9745697456
ರೈತರು ತಮ್ಮ ತರಕಾರಿಗಳು ಮತ್ತು ಹಣ್ಣುಗಳನ್ನು ಮಾರಾಟ ಮಾಡಲು ಯಾವುದೇ ಸಹಾಯಕ್ಕಾಗಿ “AGRO WAR ROOM” ಅನ್ನು ಸಂಪರ್ಕಿಸಬಹುದು. 080-22212818 / 080-22210237
ರಾಜ್ಯ ಸರ್ಕಾರದ ಆಹಾರ ಸಹಾಯವಾಣಿ ಸಂಖ್ಯೆ: 155214
ರಾಜ್ಯದಲ್ಲಿ ದೂರವಾಣಿ ಮೂಲಕ (ಟಿಲಿಮೆಡಿಸಿನ್) ಸ್ವಯಂಸೇವೆ ಮಾಡಬಯಸುವ ವೈದ್ಯರ ನೋಂದಣಿಗೆ ದೂರವಾಣಿ ಸಂಖ್ಯೆ 080-47192219
ಮಾನಸಿಕ ಆರೋಗ್ಯ ಕುರಿತ ಸಲಹೆಗಳಿಗೆ ನಿಮ್ಹಾನ್ಸ್ ಸಹಾಯವಾಣಿ ಸಂಖ್ಯೆ 080-46110007
ಕೇಂದ್ರ ಸರ್ಕಾರದ ಆರೋಗ್ಯ ಸಹಾಯವಾಣಿ ಸಂಖ್ಯೆಗಳು 1075 / +91-11-23978046
ಸಹಾಯವಾಣಿ ಇಮೇಲ್ ncov2019@gov.in / ncov2019@gmail.com
ಇದನ್ನು ಮೈಗೋವ್ ಕರೋನಾ ಹೆಲ್ಪ್‌ಡೆಸ್ಕ್ ಎಂದು ಕರೆಯಲಾಗುತ್ತದೆ. ವಾಟ್ಸಾಪ್ನಲ್ಲಿ ಈ ಸಂಖ್ಯೆಗೆ ಹಾಯ್ ಎಂದು ಹೇಳಿ ಮತ್ತು ಕರೋನಾಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀವು ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಪಡೆಯುತ್ತೀರಿ. 9013151515
Arogya Setu
SRF
ivrs