ಜಾತಿ ಪ್ರಮಾಣಪತ್ರ
ಕರ್ನಾಟಕದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಮುಂತಾದವು) 1990 ರ ಕಾಯ್ದೆಯ ಪ್ರಕಾರ ಮತ್ತು ಇತರ ಸರ್ಕಾರ ಪ್ರಕಟಣೆಗಳ ಪ್ರಕಾರ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ನಾಗರಿಕರಿಗೆ ಅಗತ್ಯವಿರುವ ವಿವಿಧ ಜಾತಿ ಮತ್ತು ವರಮಾನ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.
ಅರ್ಜಿದಾರನು ಅರ್ಜಿಗಳನ್ನು ಸಂಗ್ರಹಿಸಲು ಹೋಬಳಿ ಮಟ್ಟದಲ್ಲಿ ನಾಡ ಕಛೇರಿ / ಎ.ಜೆ.ಎಸ್ ಕೆ ಕೇಂದ್ರಗಳಿಗೆ ಭೇಟಿ ನೀಡಬಹುದು ಅಥವಾ ಅರ್ಜಿಗಳನ್ನು ವೆಬ್ ಸೈಟ್ ಮೂಲಕ ಆನ್ ಲೈನ್ ಲ್ಲಿ ಸಲ್ಲಿಸಬಹುದು.
ಜಾತಿ ಪ್ರಮಾಣಪತ್ರಗಳು ಜೀವ ಸಮಯದ ವರೆಗೂ ಮಾನ್ಯತೆ ಹೊಂದಿದ್ದು ಮತ್ತು ಆದಾಯ ಪ್ರಮಾಣಪತ್ರಗಳು ಐದು ವರ್ಷಗಳವರೆಗೆ ಮಾನ್ಯವಾಗಿವೆ. ಆದ್ದರಿಂದ, ಪ್ರತಿ ವರ್ಷ ಈ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸುವುದು ಅನಿವಾರ್ಯವಲ್ಲ.
ಜಾತಿ ಪ್ರಮಾಣ ಪತ್ರ ವೀಕ್ಷಿಸಲು : Link
ನಾಡಕಛೇರಿ ಕೇಂದ್ರ
ಸ್ಥಳ : ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಚೇರಿಗಳಲ್ಲಿ | ನಗರ : ಗದಗ | ಪಿನ್ ಕೋಡ್ : 582101