• Social Media Links
  • Site Map
  • Accessibility Links
  • ಕನ್ನಡ
Close

ಭೂಮಿ ದಾಖಲೆಗಳು – ಆರ್ ಟಿ ಸಿ ಸೇವೆಗಳು

ಪಹಣಿ ಆನ್ ಲೈನ್ ಎಂಬುದು ಅಂತರ್ಜಾಲದ ಮುಖಾಂತರ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಮೂಲ ಆರ್ ಟಿ ಸಿ ಯನ್ನು ಪಡೆಯುವ ಸೌಕರ್ಯವಾಗಿರುತ್ತದೆ. ಸಾರ್ವಜನಿಕರು ರೂ.10 ನ್ನು ಆನ್ ಲೈನ್ ನಲ್ಲಿ ಪಾವತಿಸಿ ಎಲ್ಲಿಂದಲಾದರೂ ಆರ್ ಟಿ ಸಿಯನ್ನು ಪಡೆಯಬಹುದು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ , ಇದು ಕರ್ನಾಟಕ ಸರ್ಕಾರವು ಆರಂಭಿಸಿರುವ ಒಂದು ವಿಶಿಷ್ಟ ವ್ಯವಸ್ಥೆಯಾಗಿದೆ.

ಆರ್.ಟಿ.ಸಿ ವಾಲೆಟ್ ಯಾವುದೇ ಸ್ಥಳೀಯ ವಾಣಿಜ್ಯೋದ್ಯಮಿಯು ಕಂದಾಯ ಇಲಾಖೆಯೊಂದಿಗೆ ಆನ್ ಲೈನ್ ಖಾತೆಯನ್ನು ತೆರೆಯಲು ಮತ್ತು ಆರ್.ಟಿ.ಸಿ ವ್ಯಾಲೆಟ್ನಲ್ಲಿ ರೂ 1000\- ಠೇವಣಿ ಯನ್ನು ಇರಿಸಿ ಮತ್ತು ಠೇವಣಿ ಹಣ ಬಳಸಿ ಒಂದು ಆರ್.ಟಿ.ಸಿ ಗೆ ರೂ. 10 ರಂತೆ ಆರ್ ಟಿ ಸಿ ಯನ್ನುಮುದ್ರಿಸಿ ವಿತರಿಸಲು ಆರ್.ಟಿ.ಸಿ ವಾಲೆಟ್ ವ್ಯವಸ್ಥೆಯು ಅವಕಾಶ ನೀಡುತ್ತದೆ.ಸ್ಥಳೀಯ ಉದ್ಯಮಿಗಳು ಯಾವುದೇ ಸಮಯದಲ್ಲಿ ರೂ.1000/ – ವರೆಗೆ ಹಣವನ್ನು ಠೇವಣಿ ನವೀಕರಿಸಿ ಆರ್.ಟಿ.ಸಿ ಗಳನ್ನು ವಿತರಿಸಬಹುದು.

ಕರ್ನಾಟಕದ ರಾಜ್ಯದಲ್ಲಿ ಮಾತ್ರ ಈ ವ್ಯವಸ್ಥೆಯು ಜಾರಿಯಲ್ಲಿದೆ.

ನಿಮ್ಮ ಆರ್.ಟಿ.ಸಿ ಪಡೆಯುವುದಕ್ಕಾಗಿ ತಾಲ್ಲೂಕು ಕಚೇರಿಯನ್ನು ಅಥವಾ ನಾಡಕಾಚೇರಿ ಕಚೇರಿಗಳನ್ನು ನೀವು ಭೇಟಿ ನೀಡಬೇಕಾಗಿಲ್ಲ. ನಿಮ್ಮ ಮನೆಯಲ್ಲಿಯೇ ನೀವು ಅದನ್ನು ಪಡೆಯಬಹುದು

ಆನ್ ಲೈನ್ ಮುಖಾಂತರ ಆರ್.ಟಿ.ಸಿ ಪಡೆಯಲು : http://www.landrecords.karnataka.gov.in
ಆರ್.ಟಿ.ಸಿ ಯ ಹಾರ್ಡ್ ಕಾಪಿಯನ್ನು ನಾಡಕಛೇರಿಯ ಯಾವುದೇ ಕೇಂದ್ರದಲ್ಲಿ ಪಡೆಯಲು : http://nadakacheri.karnataka.gov.in

ನಾಡಕಛೇರಿ ಕೇಂದ್ರ

Location : ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಚೇರಿಗಳಲ್ಲಿ | City : ಗದಗ | PIN Code : 582101