Post style – 1

News title goes here
ಪುಲಿಗೆರೆ ಸೋಮನಾಥ್(ಕ್ರಿ ಶ 1299) ಹಳಗನ್ನಡದ ಕವಿಗಳೊಲ್ಲಬ್ಬರು. ಇವರು ಹೊಯ್ಸಳರ ರಾಜಾಶ್ರಯದಲ್ಲಿ ಇದ್ದರು. ಸೋಮನಾಥನು ಗದಗ ಜಿಲ್ಲೆಯ ಲಕ್ಷೇಶ್ವರ(ಮೊದಲ ಹೆಸರು ಪುಲಿಗೆರೆ)ದವನು.
ಕನ್ನಡ, ಸಂಸ್ಕ್ರತ ಭಾμÁ ಪಂಡಿತನಾದ ಈತನ ಅಂಕಿತನಾಮ ಹರಹರಾ ಶ್ರೀ ಚೆನ್ನಸೋಮೇಶ್ವರ.
ಸೋಮೇಶ್ವರ ಶತಕವನ್ನು ವೃತ್ತ ಛಂದಸ್ಸಿನಲ್ಲಿ ರಚಿಸಿದ್ದಾನೆ. ಸೋಮೇಶ್ವರ ಶತಕವು ನೀತಿ ಶಾಸ್ತ್ರವನ್ನು ಹೇಳುವ ಪದ್ಯಗಳಿಂದ ಕೂಡಿದೆ.

News title goes here
ನಮಗೆ ಇಂದು ಲಭ್ಯವಿರುವ ಸಾಹಿತ್ಯ ಹಾಗೂ ಶಾಸನಗಳ ಪ್ರಕಾರ ಗದಗ ಜಿಲ್ಲೆಯು ಆನೇಕ ರಾಜವಂಶಗಳ ಆಡಳಿತವನ್ನು ಕಂಡಿದೆ. ಬನವಾಸಿಯ ಕದಂಬರು, ತಲಕಾಡಿನ ಗಂಗರು, ಬದಾಮಿಯ ಚಾಲುಕ್ಯರು,ಮಳಖೇಡದರಾಷ್ಟಕೂಟರು, ಕಲ್ಯಾಣದ ಚಾಲುಕ್ಯರು,ಕಲಚುರಿಯ ರಾಜರು, ಹೊಯ್ಸಳರು,ವಿಜಯನಗರದ ರಾಜರು ಇಲ್ಲಿ ಆಡಳಿತ ನಡೆಸಿದ ಪ್ರಮುಖರು.
ಇವರ ಆಡಳಿತದ ಕಾಲದಲ್ಲಿ ಹಿಂದೂ ಧರ್ಮ ಹಾಗೂ ಜೈನ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಿತ್ತು. ಅನೇಕ ದೇವಸ್ಥಾನಗಳ ನಿರ್ಮಾಣ ಇವರ ಕಾಲದಲ್ಲಿ ಆಗಿದೆ. ಕಲೆ, ಸಾಹಿತ್ಯದ ಬೆಳವಣಿಗೆಗೆ ಇವರು ನೀಡಿದ ಕೊಡುಗೆ ಅಪಾರ.