ಸಾರ್ವಜನಿಕ ಆರೋಗ್ಯದ ಮೇಲೆ ದೊಡ್ಡ ಮಾರಕವಾಗಿ ಪರಿಣಮಿಸುತ್ತಿರುವಲ್ಲಿ ತಂಬಾಕು ಸೇವನೆಯು ಒಂದಾಗಿದೆ. ಇದು ವಿಶ್ವದಾದ್ಯಂತ ವರ್ಷಕ್ಕೆ 80 ಲಕ್ಷಕ್ಕೂ ಹೆಚ್ಚೂ ಜನರನ್ನು ಕೊಲ್ಲುತ್ತಿದೆ ಹಾಗೂ ಪ್ರತ್ಯಕ್ಷ ದೂಮಪಾನ ಮಾಡುವುದರಿಂದ ಸುಮಾರು 70 ಲಕ್ಷಗಳಷ್ಟು ಜನರು ಸಾವಿಗಿಡಾದರೆ ಧೂಮಪಾನ ಮಾಡದವರು ಪರೋಕ್ಷ ಧೂಮಪಾನಕ್ಕೆ ಬಲಿಯಾಗಿ 12 ಲಕ್ಷ ಜನರು ಸಾವಿಗಿಡಾಗುತ್ತಿದ್ದಾರೆ ವಿಶ್ವದಾದ್ಯಂತ ಇರುವ 110 ಕೋಟಿ ಧೂಮಪಾನಿಗಳಲ್ಲಿ ಸುಮಾರು 80% ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಅಲ್ಲಿ ತಂಬಾಕು ಸಂಬಂಧಿತ ಖಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನು ಮಾಡುವ ಬದಲಾಗಿ ತಂಬಾಕಿಗೆ ಖರ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ ಭಾರತ ಸರಕಾರ 2007-08 ರಲ್ಲಿ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು (ಎನ್.ಟಿ.ಸಿ.ಪಿ) ಪ್ರಾರಂಭಿಸಿತು. ವಿಶ್ವ ವಯಸ್ಕರ ತಂಬಾಕು ಸಮೀಕ್ಷೆ (ಜಿ.ಎ.ಟಿ.ಎಸ್) 2009-10 ರಂತೆ ತಂಬಾಕು ಬಳಕೆಯ ಪ್ರಮಾಣವನ್ನು ಸೂಚಿಸುತ್ತದೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಹಾಕಿಕೊಳ್ಳಲಾಗಿತ್ತು ಜಿ.ಎ.ಟಿ.ಎಸ್ 2ನೇ ಸಮೀಕ್ಷೆಯ ಪ್ರಕಾರ ತಂಬಾಕು ಬಳಸುವವರ ಸಂಖ್ಯೆ ಸುಮಾರು 81 ಲಕ್ಷ ಕಡಿಮೆಯಾಗಿದೆ. ಕರ್ನಾಟಕದ ಎಲ್ಲಾ 30 ಜಿಲ್ಲೆಗಳಲ್ಲಿ ಎನ್.ಟಿ.ಸಿ.ಪಿ ಯನ್ನು ಜಾರಿಗೆ ತರಲಾಗಿದೆ. 2015-16ನೇ ಸಾಲಿನಲ್ಲಿ ಎನ್.ಟಿ.ಸಿ.ಪಿಯನ್ನು ಗದಗ ಜಿಲ್ಲೆಯಲ್ಲಿ ಜಾರಿಗೆ ತರುವ ಮುಖಾಂತರ 2015-16ನೇ ಸಾಲಿನಿಂದಲೂ ಗದಗ ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉದ್ದೇಶಗಳು
1. ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
2. ತಂಬಾಕು ಉತ್ಪನ್ನಗಳ ಸೇವನೆ,ಉತ್ಪಾದನೆ ಮತ್ತು ಪೂರೈಕೆಯನ್ನು ಕಡಿಮೆಮಾಡುವುದು.
3. ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ(ಕೋಟ್ಪಾ)2003 ರನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು.
4. ತಂಬಾಕು ಬಳಕೆಯನ್ನು ತ್ಯಜಿಸಲು ಸೇವೆಯನ್ನು ಒದಗಿಸುವುದು.
5. ತಂಬಾಕು ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ವಿಶ್ವ ಆಯೋಗ್ಯ ಸಂಸ್ಥೆಯ ಎಫ್.ಸಿ.ಟಿ.ಸಿಯ ಕಾರ್ಯತಂತ್ರಗಳನ್ನು ಅನುಷ್ಟಾನಮಾಡುವುದು.
ಎನ್.ಟಿ.ಸಿ.ಪಿಯ ರಚನೆ
ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿಯಂತ್ರಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶವನ್ನು ರಚಿಸಲಾಗಿದೆ. ನೀತಿ ರೋಪಿಸುವಿಕೆ, ಯೋಜನೆ ತಯಾರಿ ಮತ್ತು ತಂಬಾಕು ನಿಯಂತ್ರಣ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು ಇದರ ಜವಾಬ್ದಾರಿಯಾಗಿರುತ್ತದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಜಂಟಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು
• ಸಾರ್ವಜನಿಕ ಜಾಗೃತಿ, ಸಮೂಹ ಮಾಧ್ಯಮ ಜಾಗೃತಿ ಅಭಿಯಾನ ಮತ್ತು ಸಾಮಾಜಿಕ ವರ್ತನೆ ಬದಲಾವಣೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
• ರಾಷ್ಟ್ರಮಟ್ಟದಲ್ಲಿ ತಂಬಾಕು ಉತ್ಪನ್ನಗಳ ಪರೀಕ್ಷೆಯ ಪ್ರಯೋಗಾಲಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡುವುದು.
• ಇತರೆ ನೋಡಲ್ ಇಲಾಖೆಗಳ ಸಮನ್ವಯದೊಂದಿಗೆ ಪರ್ಯಾಯ ಬೆಳೆಗಳು,ಜೀವನೋಪಾಯಕ್ಕೆ, ಅಗತ್ಯವಿರುವ ಸಂಶೋದನೆ ಹಾಗೂ ತರಬೇತಿಗಳನ್ನು ಆಯೋಜಿಸುವುದು.
• ಕಣ್ಗಾವಲು ಸೇರಿದಂತೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನಡೆಸುವುದು.
• ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಆರೋಗ್ಯ ಸೇವೆ ನೀಡುವಲ್ಲಿ ಒಂದು ಭಾಗವಾಗಿ ಕಾರ್ಯನಿರ್ವಹಿಸುವುದು.
ರಾಜ್ಯ ಮಟ್ಟದಲ್ಲಿ
• ರಾಜ್ಯ ಮಟ್ಟದಲ್ಲಿ ತಂಬಾಕು ನಿಯಂತ್ರಣ ಮಾಡಲು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮೇಲ್ವಿಚಾರಣೆ ಮಾಡುವುದು.
• ರಾಜ್ಯ ಮಟ್ಟದಲ್ಲಿ ಅಡ್ವಕೆಸಿ ಕಾರ್ಯಾಗಾರಗಳನ್ನು ಆಯೋಜಿಸುವುದು.
• ಜಿಲ್ಲಾ ಮಟ್ಟದಲ್ಲಿ ಎನ್.ಟಿ.ಸಿ.ಪಿ. ಕಾಂiÀರ್iಕ್ರಮದ ಅಡಿಯಲ್ಲಿ ನೇಮಕಗೊಂಡು ಕರ್ತವ್ಯ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿಗಳನ್ನು ಆಯೋಜಿಸುವುದು.
• ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪುನರ್ ಮನನ ತರಬೇತಿಗಳನ್ನು ಆಯೋಜಿಸುವುದು.
• ತಂಬಾಕು ವ್ಯಸನ ಬಿಡಿಸಲು ವ್ಯಸನ ಮುಕ್ತ ಕೇಂದ್ರಗಳಲ್ಲಿ ಕರ್ತವ್ಯ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ವೃತ್ತಿಪರರಿಗೆ ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರಿಗೆ ತರಬೇತಿ ನೀಡುವುದು.
• ಕೋಟ್ಪಾ ಕಾಯ್ದೆಯ ಅನುಷ್ಠಾನ ಮಾಡುವುದು ಕಾನೂನು ಜಾರಿ ಅಧಿಕಾರಿಗಳಿಗೆ ಕಾನೂನು ತರಬೇತಿಗಳನ್ನು ಆಯೋಜಿಸುವುದು.
ಜಿಲ್ಲಾ ಮಟ್ಟದಲ್ಲಿ
• ಕಾನೂನು ಜಾರಿ ಅಧಿಕಾರಿಗಳಿಗೆ ಶಾಲಾ ಶಿಕ್ಷಕರಿಗೆ ಕಾಲೇಜು ಉಪನ್ಯಾಸಕರಿಗೆ ಸಾಮಾಜಿಕ ಕಾರ್ಯಕರ್ತರು ಸರಕಾರೇತರ ಸಂಸ್ಥೆಗಳ ಪ್ರತಿ ನಿಧಿಗಳಿಗೆ ಮತ್ತು ಪಂಚಾಯ್ತಿ ಮಟ್ಟದ ಅಧಿಕಾರಿಗಳಿಗೆ ತರಬೇತಿಗಳನ್ನು ಆಯೋಜಿಸುವುದು.
• ಮಾಹಿತಿ ಶಿಕ್ಷಣ ಸಂವಹನ (ಐ.ಇ.ಸಿ) ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಹದಿಹರೆಯದ ವಯಸ್ಸಿನವರು ತಂಬಾಕು ವ್ಯಸನಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸುವುದು.
• ನಗರ ಸ್ಥಳೀಯ ಮತ್ತು ಪಂಚಾಯತ್ ರಾಜ್ಯ ಸಂಸ್ಥೆಗಳ ಸಮನ್ವಯದೊಂದಿಗೆ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವುದು.
• ಪೋಲಿಸ್ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಕೋಟ್ಪಾ ಕಾಯ್ದೆಯ ಉಲ್ಘಂಘನೆಯನ್ನು ಪತ್ತೆಮಾಡಿ ಉಲ್ಘಂಘನೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು.
ಗದಗ ಜಿಲ್ಲೆಯಲ್ಲಿ ಆಯೋಜಿಸಿರುವ ವಿನೂತನ ಕಾರ್ಯಕ್ರಮವು ಗುಲಾಬಿ ಆಂದೂಲನ:- ದೂಮಪಾನ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಹಾಗೂ ಕೋಟ್ಪಾ ಕಾಯ್ದೆಯನ್ನು ಉಲ್ಲಂಘನೆ ಮಾಡದಂತೆ ಸಾರ್ವಜನಿಕರಿಗೆ ಗುಲಾಬಿ ಹೂ ಮತ್ತು ಕರಪತ್ರವನ್ನು ನೀಡಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ಮನವರಿಕೆ ಮಾಡುವುದೇ ಗುಲಾಬಿ ಆಂದಲೋಲನದ ಕಾರ್ಯತಂತ್ರವಾಗಿದೆ. ಗದಗ ಜಿಲ್ಲೆಯಲ್ಲಿ ಇಂತಹ ಅನೇಕ ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿ ಹಾಗೂ ಸೇವೆಗಳನ್ನು ಪಡೆಯಲು ಸಂಪರ್ಕಿಸಿರಿ
ಕ್ರ.ಸಂ |
ಹೆಸರು |
ಹುದ್ದೆ |
ವಿಳಾಸ |
1 |
ಡಾ.ಜಗದೀಶ ನುಚ್ಚಿನ್ |
ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು
|
ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ ಎಂ.ಸಿ.ಹೆಚ್.ಆಸ್ಪತ್ರೆ ಆವರಣ ಕೆ.ಸಿ.ರಾಣಿ ರೋಡ ಗದಗ-582101 |
2 |
ಶ್ರೀ ಗೋಪಾಲ ಸೂರಪೂರ |
ಜಿಲ್ಲಾ ಸಲಹೆಗಾರರು
|
|
3 |
ಶ್ರೀಮತಿ ಬಸಮ್ಮ ಚಿತ್ತರಗಿ |
ಸಾಮಜಿಕ ಕಾರ್ಯಕರ್ತರು |
|
4 |
ಶ್ರೀಮತಿ ರೇಷ್ಮಾಬೆಗಂ.ಎನ್.ನಧಾಫ |
ಆಪ್ತ ಸಮಾಲೋಚಕರು /ಮನಶಾಸ್ತøಜ್ಞರು |
ತಂಬಾಕು ವ್ಯಸನ ಮುಕ್ತ ಕೇಂದ್ರ , ಕೊಠಡಿ.ಸಂ.149 ಜಿಲ್ಲಾ ಆಸ್ಪತ್ರೆ ಮಲ್ಲಸಮುಂದ್ರ ಗದಗ-582103 |
ತಂಬಾಕು ತ್ಯಜಿಸುವ ಸಹಾಯವಾಣಿ ಸಂಖ್ಯೆ : 1800112356 ಅಥವಾ 104
ಕೋಟ್ಪಾ ಕಾನೂನು ಕೈಪಿಡಿ
ಕೋಟ್ಪಾ ಕಾನೂನು ಕೈಪಿಡಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೋಟ್ಪಾ ಕಾಯ್ದೆಯ ಪ್ರತಿ
ಕೋಟ್ಪಾ ಕಾಯ್ದೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಎನ್.ಟಿ.ಸಿ.ಪಿಯ ಮಾರ್ಗಸೂಚಿಗಳು
ಎನ್.ಟಿ.ಸಿ.ಪಿಯ ಮಾರ್ಗಸೂಚಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇತರೆ ಲಿಂಕಗಳು